Why a new hardware keyboard for Indian languages ?

ಅನಿಸಿಕೆಗಳು… A B C D ಇಂದ –ಅಆಇಈ – ಕಡೆಗೆ

-ಶ್ರೀ ಬಿವಿಕೆ ಶಾಸ್ತ್ರಿ, ಗುರು ಪ್ರಸಾದ, ಆರ್ಲೋಂಡೋ
(ನಾದ ಕನ್ನಡ ಕಿಲಿಮಣೆಯನ್ನು ಬಳಸಲಾಗಿದೆ )

ನಾದ -ಭಾರತೀಯ ಭಾಷಾ ಕಲಿಕೆಗೆ ಒಂದು ವಿಶೇಷ ಕೀಲಿಮಣೆಕೀಲಿಮಣೆಯು ಕಂಪ್ಯೂಟರಿಗೆ ಭಾಷಾ ವರ್ಣಮಾಲೆಯನ್ನು ಕಳುಹಿಸಲು ಬಳಸುವ ಸಾಧನ. ಇತ್ತೀಚಿನ ನಾಲ್ಕು ದಶಕಗಳಲ್ಲಿ ಆಂಗ್ಲ ಭಾಷಿಕ ಕೀಲಿಮಣೆ (QWERTY) ಮೇಲಿನ ಶ್ರೇಣಿಯ ಕ್ರಮದಲ್ಲಿ ಇರುವ ಈ ಸಾಧನವು ವಿಶ್ವಾದ್ಯಂತ ಬಳಕೆಯಲ್ಲಿ ಇದೆ. ಭಾರತೀಯ ಬಾಷೆಗಳ ವರ್ಣಾಕ್ಷರಗಳನ್ನು ಕಂಪ್ಯೂಟರಿನಲ್ಲಿ ಟಂಕಿಸಲು ಇದೇ ಆಂಗ್ಲ ಭಾಷಿಕ ಕೀಲಿಮಣೆಯನ್ನೇ ಬಳಸಲಾಗುತ್ತಿ ದೆ.  ತಂತ್ರಾಂಶ ಪರಿಷ್ಕಾರದ (software processing) ಮೂಲಕ  ಆಂಗ್ಲಭಾಷಿಕ ಕೀಲೊತ್ತುಗಳ ಮೇಲೆ ಕನ್ನಡ ( ಅಥವಾ ಇತರೆ ಭಾರತೀಯ ಭಾಷಿಕ ವರ್ಣಮಾಲೆಯ)  ಅಕ್ಷರಗಳನ್ನು ಸಂಯೋಜನೆ ಮಾಡುವುದರಿಂದ ಕಂಪ್ಯೂಟರಿನ ದೃಶ್ಯ ಪರದೆಯ ಮೇಲೆ  ಕನ್ನಡ ( ಅಥವಾ ಇತರೆ ಭಾರತೀಯ ಭಾಷಿಕ ವರ್ಣಮಾಲೆಯ)  ಅಕ್ಷರಗಳ ದೃಶ್ಯ ಮೂಡಿಬರುತ್ತದೆ. ಇದನ್ನು ಕನ್ನಡ / ಭಾರತೀಯ ಭಾಷಾ-ಗಣಕೀಕರಣ ಟಂಕನ -ಪ್ರಗತಿ ಎಂದು ಹೆಮ್ಮೆಯಿಂದ ಹೇಳಿಕೊಳ್ಳಲಾಗಿದೆ.
ಈ ರೀತಿಯಾಗಿ ಉಚ್ಚಾರಣಾ ಪ್ರಧಾನವಾದ ( Voice-Primary ) ಭಾರತೀಯ ಭಾಷೆಗಳ ಟಂಕನ ಕ್ರಮವನ್ನು ಆಂಗ್ಲಭಾಷಿಕ- ಸ್ಪೆಲ್ಲಿಂಗ್ ಮಾದರಿಯ (Spelling character sequence keying in ) ಕ್ರಮದಲ್ಲಿ ಕೀಲಿಮಣೆಯಲ್ಲಿ ಟಂಕಿಸಲು ವಿದ್ಯಾರ್ಥಿಗಳ ತರಬೇತಿಗಾಗಿ, ರಾಜ್ಯ್ಯಸರ್ವಕಾರ,  ಶಾಲಾಶಿಕ್ಷಣ ಮಂಡಲಿಗಳು ಹಾಗೂ ಭಾರತೀಯ/ ಕನ್ನಡ- ಭಾಷಾಪ್ರಾಧಿಕಾರಗಳು  ಬಹಳ ಶ್ರಮ ವಹಿಸುತ್ತಿವೆ. ಈ ಶ್ರಮ- ವ್ಯಯದ  ಹಿಂದಿನ ಉದ್ದೇಶ, ಮಕ್ಕಳಿಗೆ ಪ್ರಾಥಮಿಕ  ಹಂತದಿಂದಲೂ ಮಾತೃ ಭಾಷೆಯಲ್ಲಿ ಕಂಪ್ಯೂಟರಿನ ಬಳಕೆ ಮಾಡಿಕೊಳ್ಳಲು ತರಬೇತಿ ನೀಡಬೇಕೆಂಬ ಗುರಿ ;ಇದು ನಿಜವಾಗಿ ಅತಿ ಮಹತ್ತ್ವದ ಅಂಶವಾಗಿದೆ.  ಆದರೆ ಆಂಗ್ಲಭಾಷೆಯ ಆಧಾರದ ಮೇಲೆ ನೀಡಲಾಗುತ್ತಿರುವ ಮಾತೃಭಾಷಾ-ಕಂಪ್ಯೂಟರ್ ತರಬೇತಿ ಮೂಲ ಉದ್ದೇಶವನ್ನು ಸಫಲಗೊಳಿಸುತ್ತದೆಯೇ ? ಈ ಅಂಶವನ್ನು ಪರಿಶೀಲಿಸೋಣ.

 

ಕನ್ನಡ ಭಾಷಾ ಕಲಿಕೆ ಕಂಪ್ಯೂಟರಿನಲ್ಲಿ ಕನ್ನಡ -ಭಾಷಾ ಸ್ವಭಾವಕ್ಕೆ -ಅನುಗುಣವಾಗಿರಬೇಕಾದರೆ ಕೀಲಿಮಣೆಯಲ್ಲಿ ಅಕ್ಷರ ವಿನ್ಯಾಸ ಕನ್ನಡ ಭಾಷಾ
ಶೈಲಿಗೆ ಅನುಗುಣವಾಗಿ ಇರಬೇಕು. ಕನ್ನಡದ ವರ್ಣ-ಮಾಲೆಯ   ” ಅಆಇಈ” –  ಕ್ರಮವನ್ನು –   ಆಂಗ್ಲಭಾಷಾ ಅಕ್ಷರ ಮಾಲೆಯ  A B C D (ಅ ಬ ಚ ಡ ) ಅಥವಾ  ಬೇರೆ ಸ್ಪೆಲ್ಲಿಂಗ್ ಕ್ರಮಕ್ಕೆ ಹೊಂದಾಣಿಕೆ ಮಾಡಿದಾಗ ಭಾಷಾ ವಿಸಂಗತಿ ಉಂಟಾಗುತ್ತದೆ. ಕಲಿಕೆದಾರನ ಮನಸ್ಸಿನಲ್ಲಿ ಅಕ್ಷರ ಟಂಕನೆಗೆ ಮೊದಲು ಉಚ್ಚಾರಣೆ – ಸ್ಪೆಲ್ಲಿಂಗ್ ಹೊಂದಾಣಿಕೆಗಳ ಕಾರಣಾವಾಗಿ ಭಾಷಿಕ ಗೊಂದಲ ಮೂಡಿಬರುತ್ತದೆ. ಇದರಿಂದಾಗಿ ಆಂಗ್ಲ-ಭಾಷಿಕ ಕೀಲಿಮಣೆಯಲ್ಲಿ  ಕನ್ನಡಕಲಿಕೆಯ ಮೂಲವಿನ್ಯಾಸದಲ್ಲೇ  ಕನ್ನಡದ ಆತ್ಮ -ಪ್ರಾಣವಾಗಿ ಆಂಗ್ಲಭಾಷೆ ಸ್ಥಿರವಾಗಿ ನಿಂತುಬಿಡುತ್ತದೆ. ಕಲಿಕೆದಾರನ ಮನಸ್ಸಿನಲ್ಲಿ ಕಂಪ್ಯೂಟರಿನಲ್ಲಿ ಕನ್ನಡದ ಬಳಕೆಗೆ ಆಂಗ್ಲ ವಾಸನೆ ಅತ್ಯಾವಶ್ಯಕ ಎಂಬ ಅರಿವು ಮೂಲಾಧಾರ ಸ್ವರೂಪದಲ್ಲಿ ಸ್ಥಿರವಾಗಿ ಶಾಶ್ವತವಾಗಿ ಸ್ಥಾನ ಪಡೆಯುತ್ತದ

ನಾದ-ಕೀಲಿಮಣೆಯಲ್ಲಿ  ಕನ್ನಡ ಟಂಕನ ಮಾಡಬೇಕಾದರೆ ಬಳಕೆದಾರನ ಮನಸ್ಸು ಮತ್ತು ಬೆರಳುಗಳು ಕನ್ನಡ ವರ್ಣಮಾಲೆಯ ಕ್ರಮದಂತೆ ಕೀಲಿಮಣೆಗಳಲ್ಲಿ ಅಕ್ಷರ-ಜೋಡಿಕೆಗೆ ಟಂಕನ ಮಾಡಬೇಕಾಗುತ್ತದೆ. ಎಂದರೆ ಅಮ್ಮ -ಅಪ್ಪ ಎಂದು ಟಂಕಿಸಬೇಕಾದರೆ ಕಲಿಕೆದಾರನ ಮನಸ್ಸಿನಲ್ಲಿ   ಕನ್ನಡದ ಕ್ರಮವಾದ < ಅ – ಮ ಗೆ ಒತ್ತಕ್ಷರ ಮ / ಅ – ಪ ಗೆ ಒತ್ತಕ್ಷರ ಪ > ಎಂಬ ವರ್ಣ -ಧ್ವನಿ ಶ್ರೇಣಿ   ಮೂಡಬೇಕು ಹಾಗೂ ಇದಕ್ಕೆ ಅನುಗುಣವಾಗಿ ಕೀಲಿಮಣೆಯಲ್ಲಿ ಕೀಲಿಗಳನ್ನು ಒತ್ತಬೇಕು. ಇದರಿಂದ ಅಮ್ಮ -ಅಪ್ಪ ಎಂದು ಟಂಕಿಸಬೇಕಾದರೆ ಕಲಿಕೆದಾರನ ಮನಸ್ಸಿನಲ್ಲಿ  a-mm-a /a-pp-a  ಎಂಬ ಆಂಗ್ಲ ಅಕ್ಷರ ಶ್ರೇಣಿ  ಬರುವುದಕ್ಕೆ ಅವಕಾಶವಿಲ್ಲ. ಇದರಿಂದಾಗಿ ಭಾಷಾಟಂಕನದಲ್ಲಿ ಭಾಷಾ ಶುದ್ಧತೆ ಮನಸ್ಸಿನಲ್ಲಿ ಹಾಗೂ ಬೆರಳಚ್ಚು ಟಂಕನದಲ್ಲಿ ಏಕರೂಪವಾಗಿರುತ್ತದೆ.
ಇದೇ ಕೀಲಿಮಣೆಯಲ್ಲಿ ಆಂಗ್ಲ-ಪದಗಳನ್ನು ಟಂಕಿಸಬೇಕಾದರೆ a-b-c-d   ಕ್ರಮದಲ್ಲಿ ಸ್ಪೆಲ್ಲಿಂಗ್ ಆಧಾರದ  ಮೇಲೆ ಟಂಕಿಸಲು ಬರುತ್ತದೆ. ಈ ಆಯ್ಕೆಯಲ್ಲಿ ಕನ್ನಡ ವರ್ಣಮಾಲಾ ಕ್ರಮದ ಅನು-ಪಲ್ಲವಿ ಇರುವುದಿಲ್ಲ. ಹೀಗಾಗಿ ಆಂಗ್ಲ ಭಾಷಾ ಶುದ್ಧ ಕಲಿಕೆಗೆ ಯಾವುದೇ ತೊಂದರೆ ಇರಿವುದಿಲ್ಲ.

ನಾದ ಕೀಲಿಮಣೆಯ ಬಳಕೆ -ತರಬೇತಿಗಳಿಗೆ ನಾಲ್ಕು ತಾಸುಗಳಿಗಿಂತ ಹೆಚ್ಚಿನ ಸಮಯ ಬೇಕಾಗುವುದಿಲ್ಲ. ಕನ್ನಡ ವರ್ಣಮಾಲೆಯ ಸಾಧಾರಣ ಪರಿಚಯ ಇರುವ ಯಾರೇ ಆಗಲಿ, ಒಂದು ತಾಸಿನ ಒಳಗೆ ಸಾಧಾರಣ ಬಳಕೆ ಹಾಗೂ  ನಾಲ್ಕು ತಾಸುಗಳಲ್ಲಿ ಕುಶಲತೆಯನ್ನು ಪಡೆದುಕೊಳ್ಳಬಹುದು. ಪ್ರಾಥಮಿಕ ಶಾಲಾ ಶಿಕ್ಷ ಣದಲ್ಲಿ ಭಾಷಾಶುದ್ಧತೆಗೋಸ್ಕರ ನಾದ ಅತ್ಯಂತ ಉಪಯುಕ್ತ ಸಾಧನ. ವೃತ್ತಿಗಳಲ್ಲಿ ತ್ರೈಭಾಷಿಕ ಭ್ಹಾರತೀಯ ಮಾಹಿತಿ ದಾಖಲೆ ದತ್ತಾಂಶಗಳ ಶುದ್ಧ ಟಂಕನಕ್ಕೆ ನಾದ ಕೀಲಿಮಣೆ, ನಿಮ್ಮದೇ ಕಂಪ್ಯೂಟರ್ ಜೊತೆ ಯಾವುದೇ ತಂತ್ರಾಂಶದ ಅವಶ್ಯಕತೆ ಇಲ್ಲದೆ ಬಳಸಬಹುದಾದ  ಒಂದು ಸರಳ ಉಪಯುಕ್ತ ಸುಲಭ ಸಾಧನ.
ಹೆಚ್ಚಿನ ವಿವರಗಳಿಗೆ   ಸಂಪರ್ಕಿಸಿ.

Blast from the past: Facit Kannada Typewriter & TULU Keyboard

Dr. Guru Prasad
KaNaada Phonetics pvt ltd.

Rarely we come across old keyboards for Indian languages. Today at the Bangalore Bunts Association event and exhibition,on TULU (language), Sahitya (literature) & Cultural event, came across a Kannada Typewriter among historic things people used at home and in agriculture and literature in coastal Tulunad area. Yes people had to use Kannada language Script (Lipi) to type Tulu language. Yes we do have a separate TULU lipi and yes a new TULU USB keyboard. (It has been long since the first printing press in kannada arrived in Mangalore from Germany leading to TULU granthas being printed in Kannada leading to a deadly demise of TULU (or Tigalari) script in a span of 20 years.

The Indic language computer keyboards were all overlays on keyboards based off qwerty English keyboard. QWERTY keyboard layout came from a 100 year old typewriter layout. Prof. Sastry has written some seminal articles on why Ka-Naada and why we lack keyboards suitable for Indic languages.
Facit Kannada Typewriter to type TULU

Here is a picture of an old FACIT kannada typewriter. Remington had the first typewriter more than a 100 years ago and the first line was designed to type the word TYPEWRITER fast and had nothing to do with phonetics and English with 26 alphabets is not a phonetic language (please note the second script proposed for English had 26+12 alphabets). This explains why these overlays didn’t catch up for Indic languages.

Old vs New input devices

You can imagine the difficulty faced by people who made a living off this device and the multiple buttons to get a character. The beauty of TULU script and literature needs a better digital solution. Ka-Naada TM layout has brought significant simplicity to the layout of Indic languages and a child can learn it in no time. This USB keyboard can significantly help in content creation and one keyboard can be used for any Indic language based of BRAHMI script or Lipi.
Ka-Naada TM - TULU keyboard
Above is a Ka-Naada pad for TULU typing.
NY Times article predicts the demise of 7 major languages of India (including Kannada) to be out of vogue in next 50 years. Yes it is on us to provide better solutions to save our languages and YES our CULTURE.

info@ka-naada.com

ನಾದ ಕೀಲಿಮಣೆ (ಕ-ನಾದTM) : ಕನ್ನಡ ಭಾಷೆ : ಲಿಪಿ ಮತ್ತು ಉಚ್ಚಾರಣೆ. Naada Keyboard (Ka-NaadaTM): Kannada Language: Script & Pronunciation -Prof. BVK Sastry

ಡಾ|| ಬಿ.ವಿ.ಕೆ.ಶಾಸ್ತ್ರಿ (Coinventor Naada Keyboard, Ka-Naada TM)

   www.ka-naada.com

 

ದೇಶ ನೋಡು  – ಕೋಶ ಓದು ಎಂಬುದು   ಜನಪ್ರಿಯ ಗಾದೆ. ಇದು ಎಲ್ಲರಿಗೂ ತಿಳಿದಿದೆ. ದೇಶಗಳ ವಿಷಯವನ್ನು ತಿಳಿಯಲು, ವ್ಯವಹರಿಸಲು ಭಾಷೆ ಅತಿ ಮುಖ್ಯವಾಗಿ  ಬೇಕಾಗುತ್ತದೆ. ಭಾಷೆಗೆ ಎರಡು ರೂಪಗಳಿವೆ.  ಉಚ್ಚಾರಣೆಯಲ್ಲಿ ಶಬ್ದ – ರೂಪ.  ಬರವಣಿಗೆಯಲ್ಲಿ ಲಿಪಿ -ಸಂಕೇತ  -ದೃಶ್ಯ ರೂಪ. ಶಬ್ದರೂಪಕ್ಕೆ ಉಚ್ಚಾರಿತ ವರ್ಣಮಾಲೆ,   ಲಿಪಿ ರೂಪಕ್ಕೆ ಬರವಣಿಗೆಯ ಸಂಕೇತಗಳು ಬಳಕೆಯಾಗುತ್ತದೆ.

ಭಾರತೀಯ ಭಾಷೆಗಳಲ್ಲಿ ’ ಬರೆದಂತೆ ಓದು, ನುಡಿದಂತೆ ಬರೆ’ ಎಂಬ ನಿಯಮಕ್ಕೆ ಅನುಗುಣವಾಗಿ ಪ್ರತಿಯೊಂದು ಉಚ್ಚಾರಿತ ವರ್ಣ / ವರ್ಣಸಮೂಹಕ್ಕೆ ಒಂದು ವಿಶಿಷ್ಟ ಲಿಪಿ ಸಂಕೇತವನ್ನು ನೀಡಲಾಗಿದೆ. ಇದರಿಂದ  ಬಹುತೇಕ ಭಾರತೀಯ ಭಾಷೆಗಳಲ್ಲಿ  ಇಂಗ್ಲೀಷ್ ಅಥವಾ ಇತರ ಐರೋಪ್ಯ ಪಾಶಿಮಾತ್ಯ ಭಾಷೆಗಳಲ್ಲಿ ಇರುವಂತಹ ’ ಸ್ಪೆಲ್ಲಿಂಗ್’ ಎನ್ನುವ ತಾಂತ್ರಿಕತೆ  ಬೇಕಾಗುವುದಿಲ್ಲ.

ಭಾಷೆಯ ಪ್ರಾಥಮಿಕ ಶಿಕ್ಷಣವು ಮಾತೃಭಾಷೆ / ಬಾಲ್ಯ -ಬೆಳವಣಿಗೆಯ ಪರಿಸರದಲ್ಲಿನ ಭಾಷೆಯಾಗಿ ರೂಪದಲ್ಲಿ ಜನ-ದೇಶ ಸಂಸ್ಕೃತಿಯಲ್ಲಿ ಹಾಸುಹೊಕ್ಕಾಗಿರುತ್ತದೆ. ಭಾಷೆಯ ವಿಕಸಿತ ಸ್ವರೂಪವು ನಾನಾ ಪ್ರಕಾರದ್ದಾಗಿರುತ್ತದೆ:  ಸಾಂಸ್ಕೃತಿಕ,  ಸಾಹಿತ್ಯಕ, ವ್ಯಾವಹಾರಿಕ, ಶಾಸ್ತ್ರೀಯ ಹಾಗೂ ಜಾನಪದ  ಭಾಷೆಗಳಲ್ಲಿ ಪದ ಸ್ವರೂಪಗಳು, ವ್ಯಾಕರಣ ನಿಯಮಗಳು, ತಮ್ಮದೇ ಆದ ವೈಷಿಷ್ಟ್ಯವನ್ನು ಹೊಂದಿರುತ್ತದೆ.  ಈ ರೀತಿಯಾಗಿ ಭಾಷೆಯ ನಾನಾಸ್ತರಗಳಲ್ಲಿ ಕಂಡುಬರುವ ಸಾಹಿತ್ಯ-ಪ್ರಯೋಗಗಳ ಪದಗಳನ್ನು ಕೋಶಗಳಲ್ಲಿ ದಾಖಲಿಸುತ್ತಾರೆ.  ಕೋಶವನ್ನು ಓದುವುದರಿಂದ ದೇಶವಿಶೇಷಗಳ ಸಂಸ್ಕೃತಿಯ ಪರಿಚಯ ಉಂಟಾಗುತ್ತದೆ. ಪ್ರಾಚೀನ ಸಾಹಿತ್ಯದ ಪದ-ಕೋಶಗಳನ್ನು ಓದುವುದರಿಂದ ಪ್ರಾಚೀನ ಸಂಸ್ಕೃತಿಯ , ಇತಿಹಾಸ -ಚರಿತ್ರೆಗಳ ಪರಿಚಯ ಉಂಟಾಗುತ್ತದೆ.

ಭಾಷೆಯು ದೇಶದ ಸಂಸ್ಕೃತಿಯ ಅವಿಭಾಜ್ಯ ಅಂಗ.  ಕನ್ನಡ ಪ್ರಹಸನ ಪಿತಾಮಹ ಟಿ. ಪಿ. ಕೈಲಾಸಂ ಹೇಳುತ್ತಾರೆ:  ಭಾಷೆ ಬಿಟ್ಟು ಭಾವ ನೋಡು ! ಎಂದರೆ ಭಾಷೆ ಸಾಹಿತ್ಯ ಪ್ರಯೋಗಗಳಲ್ಲಿ ಅಪರೂಪಕ್ಕೆ ಕೆಟ್ಟರೂ ಅದರ ಹಿಂದೆ ಇರುವ ಭಾವವನ್ನು ಗ್ರಹಿಸಬೇಕು. ಆದರೆ ಭಾವವೇ ಕೆಟ್ಟರೆ ?? ಖಂಡಿತವಾಗಿ  ಭಾಷೆ ಕೆಡುತ್ತದೆ !

ಭಾಷೆ ಕೆಟ್ಟರೆ ದೇಶ -ದೇಶ-ಸಂಸ್ಕೃತಿ -ಸಂಸ್ಕಾರ ಗಳು, ಅದಕ್ಕೆ ಸಂಬಂಧ ಪಟ್ಟ ಇತಿಹಾಸ, ಚರಿತ್ರೆ, ಆಚರಣೆ, ಅಭಿಮಾನಗಳೂ ಕೆಡುತ್ತವೆ. ಕೆಟ್ಟ ಭಾಷೆ   ಕೆಡುಕಿನ ಮೂಲವಾಗುತ್ತದೆ.

ಭಾಷೆಯ ಕೆಡವು  ನಾನಾ ಹಂತಗಳಲ್ಲಿ ಆಗುತ್ತದೆ. ಈ ಭಾಷಾ-ವಿಕೃತಿಯನ್ನು ತಡೆದು ಭಾಷೆಯ ಪ್ರಯೋಗವನ್ನು ಶಿಸ್ತಿನ ಚೌಕಟ್ಟಿನಲ್ಲಿ ಇರಿಸುವುದೇ  ವ್ಯಾಕರಣ, ಕೋಷ, ಸಾಹಿತ್ಯ, ಸಂಸ್ಕಾರಗಳು.  ಭಾಷೆಯನ್ನು ಬಳಸುವ ಜನಗಳು ಭಾಷೆಯ ರಕ್ಷಕರಾಗಿ ಇರುವ ತನಕ ಭಾಷೆ ಸಮಾಜದಲ್ಲಿ ಜೀವಂತವಾಗಿರುತ್ತದೆ. ಭಾಷೆಯ ವಿಕೃತಿಗಳು, ಭಾಷೆಯ ಸಂಕರಗಳು ಬಹಳ ನಿಧಾನವಾಗಿ, ಆದರೆ ಅತ್ಯಂತ ಖಚಿತವಾಗಿ  ಭಾಷಿಕ ಸವಕಳಿಯಿಂದ  ಭಾಷಿಕ ಸಮಾಜದ ಸಂಸ್ಕೃತಿಯನ್ನು ಪರಿವರನೆಗೋಳಿಸುತ್ತದೆ. ಸಂಸ್ಕೃತದಂತಹ ’ ವ್ಯಾಕರಣ ನಿಷ್ಠ – ನಿಷ್ಠುರ’  ಭಾಷೆಗಳು ತಮ್ಮ ನಿಯಮಬದ್ಧತೆಯನ್ನು ಉಳಿಸಿಕೊಳ್ಳುವುದನ್ನು ಪ್ರಧಾನವಾಗಿಟ್ಟುಕೊಂಡು ’ ಜನ-ಪ್ರಿಯ ವ್ಯವಹಾರದಿಂದ ಸ್ವಲ್ಪ ಸ್ವಲ್ಪವಾಗಿ ದೂರವಾಗುತ್ತಾ ಪಂಡಿತ ಭಾಷೆಯಾಗಿ ಮಡಿವಂತರ , ಮಠ-ಮಾನ್ಯ- ರಾಜಾಶ್ರಯ ಜೀವಿತ ದಲ್ಲಿ ತನ್ನ ಅಸ್ತಿತ್ವವನ್ನು ಕಾಪಾಡಿಕೊಳ್ಳುತ್ತದೆ’.  ಹಾಗೂ ಇದೇ ಪ್ರಕ್ರಿಯೆಯಲ್ಲಿ ಪ್ರಾಕೃತ ಗಳು, ದೇಶಭಾಷೆಗಳು ಸಂಸ್ಕೃತೋಪಜನ್ಯ – ಸಂಸ್ಕೃತೋಪಜೀವ್ಯವಾಗಿ ಸಾಮಾಜಿಕ ವ್ಯವಹಾರಕ್ಕೆ ಬರುತ್ತವೆ.  ಕಾಲಾನುಕ್ರಮದಲ್ಲಿ ಪ್ರಾಕೃತಗಳೂ ಸಂಸ್ಕೃತದಂತೆಯೇ ಸಮಾಜದಿಂದ ದೂರಸರಿಯುತ್ತಾ ಹೋಗುತ್ತವೆ.

ಈ ಭಾಷಾ-ಪರಿವರ್ತನ ಚಕ್ರವು ಭಾಷಾ-ಸಂಕರದ ಸನ್ನಿವೇಶದಲ್ಲಿ ಹೊಸ ಆಯಾಮವನ್ನು ಪಡೆಯುತ್ತದೆ. ಭಾರತದ ಭಾಷಿಕ ಸನ್ನಿವೇಶದಲ್ಲಿ  ಬ್ರಾಹ್ಮೀ ಮೂಲವಾದ ಎಲ್ಲಾ ಭಾಷೆಗಳು ಪದ -ಕೋಶ -ವ್ಯಾಕರಣಗಳಲ್ಲಿ ಭಿನ್ನವಾದರೂ, ಮೂಲಭೂತವಾದ    ವರ್ಣ-ಮಾಲೆಯಲ್ಲಿ  ಭಿನ್ನತೆಯನ್ನು ಹೊಂದಿಲ್ಲ. ಲಿಪಿ ಸಂಕೇತ ಬೇರೆಯಾದ ಮಾತ್ರದಿಂದ ಉಚ್ಚಾರಣೆಯಲ್ಲಿ ( ಬಹುತೇಕ) ಭೇದ ಕಂಡುಬರುವುದಿಲ್ಲ.  ಹೀಗಾಗಿ ಸಂಸ್ಕೃತ / ಪ್ರಾಕೃತ ಭಾಷಾ ಸಾಹಿತ್ಯಗಳು  ಕನ್ನಡ ತೆಲುಗು ಹಿಂದೀ ಬೆಂಗಾಲಿ ಗುಜರಾತಿ ಲಿಪಿಗಳಲ್ಲಿ  ಬರೆದ ಮಾತ್ರದಿಂದ  ಅವುಗಳ ಉಚ್ಚಾರಣೆಯಾಗಲೀ , ಕೋಶ -ವ್ಯಾಕರಣ ವ್ಯವಸ್ಥೆಗಳಾಗಲೀ ವ್ಯತ್ಯಾಸವನ್ನು  ಹೊಂದಲಿಲ್ಲ.

ಆದರೆ, ಹದಿನೆಂಟನೆಯ ಶತಮಾನದಲ್ಲಿ ಒಂದು ಹೊಸ ಪರಿವರ್ತನೆ ಭಾರತದಲ್ಲಿ ಉಂಟಾಯಿತು.  ಭಾರತೀಯ ಭಾಷೆಗಳ ಸಾಹಿತ್ಯವನ್ನು, ವ್ಯವಹಾರವನ್ನು , ಆಂಗ್ಲಾಕ್ಷರಗಳಲ್ಲಿ  ಬರೆಯುವ ಪದ್ಧತಿಯನ್ನು ಮತ್ತು   ಆಂಗ್ಲ ಭಾಷಾ ಮಾಧ್ಯಮದಲ್ಲಿ   ದೇಶ-ವ್ಯವಹಾರವನ್ನು ನಿರ್ವಹಿಸುವ  ಪದ್ಧತಿಯನ್ನು  ಅಂದಿನ ಬ್ರಿಟಿಷ ಸರಕಾರವು ಭಾರತದಲ್ಲಿ ಪ್ರಚುರಗೊಳಿಸಿತು.  ಇದರಿಂದಾಗಿ ಭಾರತೀಯ ಭಾಷಾ-ಲೋಕದಲ್ಲಿ  ಐರೋಪ್ಯ ಭಾಷೆಯಾದ ಆಂಗ್ಲವರ್ಣಮಾಲೆಯ  -ಉಚ್ಚಾರಣೆ ಹಾಗೂ ಲಿಪಿ ಸಂಕೇತಗಳ ಸಂಗಮ ಅನಿವಾರ್ಯವಾಯಿತು. ಇದರ ಫಲಿತ : ಭಾರತೀಯ ವರ್ಣಾಕ್ಷರ ಮಾಲೆಗೆ ಆಂಗ್ಲಾಕ್ಷರಗಳ ಹೊಂದಾಣಿಕೆ.  ಇದು ಉಚ್ಚಾರಣೆ  ಹಾಗೂ ಬರವಣಿಗೆ ಎರಡೂ ರೂಪದಲ್ಲಿ , ಎಲ್ಲಾ ಭಾರತೀಯ ಭಾಷೆಗಳ ಸನ್ನಿವೇಶದಲ್ಲಿ ಹಿಂತಿರುಗಿಸಲಾಗದಷ್ಟು ಬದಲಾವಣೆಗಳನ್ನು ಉಂಟುಮಾಡಿತು.

ಆಂಗ್ಲಾಕ್ಷರಗಳ ಹಾಗೂ ಭಾರತೀಯ ಭಾಷೆಗಳ ವರ್ಣಮಾಲೆಯ ಸಂಯೋಜನೆಯನ್ನು ೧೮ನೇ ಶತಮಾನದಲ್ಲಿ  ಮುದ್ರಣ ಸೌಕರ್ಯಕ್ಕಾಗಿ ಮಾಡಿದ ಕೋಷ್ಟಕ ಪಟ್ಟಿ ಹೀಗಿದೆ.

ಇದರಲ್ಲಿ ಭಾರತೀಯ ಭಾಷೆಗಳನ್ನು ಆಂಗ್ಲಾಕ್ಷರಗಳ ಬಳಸುವಿಕೆಯಲ್ಲಿ ಹೇಗೆ ಬರೆಯಬೇಕು – ಮುದ್ರಿಸಬೇಕು ಎಂಬ ವಿಷಯವನ್ನು ನಿರ್ಧರಿಸಲಾಗಿದೆ. ಈ ಕೋಷ್ಠಕವನ್ನು ಬಳಸಿಕೊಂಡು ಐರೋಪ್ಯ ಪಾಶ್ಚಿಮಾತ್ಯ  ಕ್ರೈಸ್ತ ವಿದ್ವಾಂಸರು ಅನೇಕ ಭಾರತೀಯ ಭಾಷೆಗಳ ಕೋಷಗಳನ್ನು ರಚಿಸಿದ್ದಾರೆ.  ಈ ಕೋಷಗಳಲ್ಲಿ ಭಾರತೀಯ ಭಾಷಿಕ ಪದಗಳ ಜೊತೆಗೆ ಆಂಗ್ಲ ಸಮಾನಾರ್ಥಕ ಪದಗಳನ್ನೂ ಕೊಟ್ಟಿದ್ದಾರೆ.  ಮುದ್ರಿತವಾದ ಈ ಪುಸ್ತಕಗಳಲ್ಲಿ ಭಾರತೀಯ ಭಾಷೆಗಳ ವರ್ಣಾಕ್ಷರಗಳ ಲಿಪಿ-ಸಂಕೇತಗಳ ಮುದ್ರಿತ -ಲಿಖಿತ ಸ್ವರೂಪವೂ ಸಹ  ಬಹುತೇಕ ನಿರ್ಧರಿಸಲ್ಪಟ್ಟಿದೆ. ಇಂದಿಗೂ ಭಾರತೀಯ ಭಾಷೆಗಳ ಲಿಪಿ ಸ್ವರೂಪಗಳು ಇಲ್ಲಿ ನಿರ್ಧಾರಿತವಾಗಿ ಕೊಟ್ಟಿರುವುದಕ್ಕಿಂತ ಭಿನ್ನವಾಗಿರುವುದಿಲ್ಲ. ಈ ರೀತಿಯಾಗಿ ಭಾರತೀಯ , ವಿಶೇಷವಾಗಿ ದಕ್ಷಿಣ ಭಾರತೀಯ ಕನ್ನಡ, ತೆಲುಗು, ತುಳು ತಮಿಳು ಅಕ್ಷರಗಳ ಲಿಪಿ-ಸ್ವರೂಪ, ಸಂಖ್ಯೆ, ಸ್ವರೂಪ, ಜೋಡಣೆ – ಇವಲ್ಲ ವೂ ಸಹ ಒಂದು ಚಾರಿತ್ರಿಕ ಸಾಮಾಜಿಕ ಪರಿವರ್ತನೆಯನ್ನು ಹೊಂದಿದವು.  ಇದರ ಪ್ರಭಾವ ಎಲ್ಲಾ ಭಾರತೀಯ ಭಾಷೆಗಳ ಸಮಗ್ರ ಅಧ್ಯಯನ -ಶಿಕ್ಷಣ – ಸಾಮಾಜಿಕ ಬಳಕೆಗಳ ಮೇಲೆ ಆಗಿದೆ. ಆಷ್ಟೇ ಅಲ್ಲದೆ ’ ಆಂಗ್ಲ- ಪರಿವರ್ತಕ ಬಣ್ಣದ ಭೂತ-ಕನ್ನಡಿಯಿಂದ  ಭಾರತೀಯ ಸಂಸ್ಕೃತಿ -ಇತಿಹಾಸಗಳ ಅಧ್ಯಯನದ ಹೊಸ ಹಾದಿ ಇಲ್ಲಿ ಕವಲೊಡೆದುಕೊಳ್ಳುತ್ತದೆ .  ಈ ರೀತಿಯಾಗಿ ಭಾರತೀಯ ಭಾಷೆಗಳು ಆಂಗ್ಲಾಕ್ಷರ-ಲಿಪಿ-ಸಂಕೇತಗಳಲ್ಲಿ ಬರೆದು ಮುದ್ರಿಸುವ ಪದ್ಧತಿ ಪ್ರಧಾನವಾಗಿ ಕ್ರೈಸ್ತ ಮತ-ಧರ್ಮದ ಪ್ರಧಾನ  ಪುಸ್ತಕವಾದ ಬೈಬಲ್ ಅನ್ನು ದೇಶಭಾಷೆಗಳಲ್ಲಿ ಅನುವಾದಿಸಿ, ಮುದ್ರಿಸಿ ವಿತರಣೆ ಮಾಡುವುದಕ್ಕಾಗಿಯೇ ಬಳಕೆಯಾಯಿತು. ನಂತರ ಚರ್ಚ್ ಮಿಷನರಿ / ಮಾಂಟೆಸ್ಸರಿ / ಕಾನ್ವೆಂಟ್ – ಶಾಲೆಗಳಲ್ಲಿ ದೇಶಭಾಷೆಯನ್ನು ಹಾಗೂ ಇಂಗ್ಲೀಷ್ ಜೊತೆ ಜೊತೆಗೆ ಕಲಿಸುವಾಗ  ಭಾರತೀಯ ಭಾಷೆಗಳ ಸಂಕರವು  ಇಂಗ್ಲೀಷ್ ಜೊತೆಗೆ ಹೆಚ್ಚುತ್ತಾ ಹೋಯಿತು. ಈ ಎರಡು ಶತಮಾನಗಳಲ್ಲಿ , ವಿಶೇಷವಾಗಿ ಸ್ವಾತಂತ್ರ್ಯೋತ್ತರ ಭಾರತದಲ್ಲಿ  ಇಂಗ್ಲೀಷ್ ಅನ್ನು ಆಡಳಿತ, ವ್ಯವಹಾರ, ಆರ್ಥಿಕ ವ್ಯವಹಾರ ಹಾಗೂ ನ್ಯಾಯಾಂಗಗಳಲ್ಲಿ ಅಳವಡಿಸಿಕೊಂಡಿರುವುದರಿಂದ ಇತರ ಎಲ್ಲಾ ಭಾರತೀಯ ಭಾಷೆಗಳಿಗಿಂತ  ಇಂಗ್ಲೀಷ್  ಪ್ರವರ್ಧಮಾನಕ್ಕೆ  ಬಂದು ಭಾರತ ನೆಲಯಲ್ಲಿ ನೆಲೆಯನ್ನು ಬಲವಾಗಿ ಕಂಡುಕೊಂಡಿದೆ. ಇತ್ತೀಚಿನ ಮೂರು ದಶಕಗಳಲ್ಲಿ ಗಣಕ ಯಂತ್ರ -ತಂತ್ರ ಜ್ಞಾನ ವೃತ್ತಿಗಳು ಇಂಗ್ಲೀಷಿನ ಬೇರಿನೊಡನೆಯೇ ಸೇರಿದ್ದು ಅಂತರ್ರ್ರಾಷ್ಟ್ರೀಯ ವ್ಯವಹಾರಕ್ಕೆ ಅವಶ್ಯಕ ಮತ್ತು  ಅನಿವಾರ್ಯವಾದ ಕಾರಣ  ಶಾಲಾ-ಶಿಕ್ಷಣದಲ್ಲಿ ಭಾರತೀಯ ಭಾಷೆಗಳಿಗಿಂತ ಇಂಗ್ಲೀಷ್ ಅಧ್ಯಯನಕ್ಕೆ ಹೆಚ್ಚು ಮಹತ್ತ್ವ ದೊರಕಿದೆ. ಕರ್ಣಾಟಕದಲ್ಲಿ ದೇಶ-ಭಾಷಾ ಮಾಧ್ಯಮ ಶಾಲೆಗಳು ಹಾಗೂ ಕನ್ನಡ ಮಾಧ್ಯಮದ ಬಗ್ಗೆ ಕಳಕಳಿ ವರ್ಷದಲ್ಲಿ ಕನ್ನಡ ರಾಜ್ಯೋತ್ಸವದ ದಿವಸಕ್ಕೆ ಸೀಮಿತವಾಗಿದ್ದು  ಇತರೆ ದಿನಗಳಲ್ಲಿ ಇಂಗ್ಲೀಷ್ ತನ್ನ ವಸಾಹತು ಶಾಹಿ ದರ್ಬಾರನ್ನು ಮುಂದುವ್ರೆಸುತ್ತಿದೆ. ಕರ್ಣಾಟಕದಲ್ಲಿ ಕಳೆದ ಇಪ್ಪತ್ತು ವರ್ಷಗಳ ಅಂತರದಲ್ಲಿ,  ಅಧಿಕಗೊಂಡಿರುವ ಆಂಗ್ಲ -ಶಿಕ್ಷಣ ನೀಡುವ  ಮಾಂಟೆಸ್ಸರಿ / ಕಾನ್ವೆಂಟ್ – ಪ್ರಾಥಮಿಕ, ಶಾಲೆಗಳ  ಸಂಖ್ಯೆ ಹಾಗೂ ಸೊರಗುತ್ತಿರುವ ಕನ್ನಡ ಮಾಧ್ಯಮ – ಕನ್ನಡ ಶಾಲೆಗಳು – ವಿದ್ಯಾರ್ಥಿಗಳ ಸಂಖ್ಯೆ ಈ ಸತ್ಯಕ್ಕೆ ಕನ್ನಡಿ ಸಾಕ್ಷಿಯಾಗಿರುತ್ತದೆ. ಕನ್ನಡ ಭಾಷೆಯ ಸೊಗಡನ್ನು ಕಳೆದುಕೊಳ್ಳುತ್ತಿರುವ ಕರ್ಣಾಟಕ ಮೇಲೆ ಹೇಳಿದ ’-ಭಾಷೆ ಕೆಟ್ಟರೆ ದೇಶ -ದೇಶ-ಸಂಸ್ಕೃತಿ -ಸಂಸ್ಕಾರ ಗಳು, ಅದಕ್ಕೆ ಸಂಬಂಧ ಪಟ್ಟ ಇತಿಹಾಸ, ಚರಿತ್ರೆ, ಆಚರಣೆ, ಅಭಿಮಾನಗಳೂ ಕೆಡುತ್ತವೆ.’ ಮಾತಿನ ನಿಜಾಯಿತಿಗೆ ಜೀವಂತ ಸಾಕ್ಷಿಯಾಗುತ್ತಿದೆ.

ಹಾಗಿದ್ದರೆ ಇದಕ್ಕೆ ಸೂಕ್ತ ಪರಿಹಾರ ಇಲ್ಲವೇ ?  ಎಂದರೆ, ಇದೆ.  ಈ ಪರಿಹಾರವು ಪ್ರಾಥಮಿಕ ಹಂತದಲ್ಲಿ ಭಾಷಾ ಶಿಕ್ಷಣ ಪದ್ಧತಿಯ ಪರಿಷ್ಕಾರದಿಂದ ಮೊದಲಾಗುತ್ತದೆ. ಈ ಪರಿಷ್ಕಾರವು ಗಣಕಯಂತ್ರ – ಸಹಾಯದಿಂದ ಶೀಘ್ರ ಹಾಗೂ ಸಾರ್ಥಕ ರೀತಿಯಲ್ಲಿ ಭಾಷಾ ಶಿಕ್ಷಣವನ್ನು ಪ್ರಾಥಮಿಕ ಹಂತದಿಂದ ಶಾಲೆಗಳಲ್ಲಿ ಅಳವಡಿಸುವುದರಿಂದ ಪರಿಣಾಮಕಾರಿಯಾಗಿ ಸಾಧಿಸಲು ಸಹಾಯಕವಾಗುತ್ತದೆ. ಇದರಿಂದ ಆಧುನಿಕ ತಂತ್ರಜ್ಞಾನವನ್ನು ಹಾಗೂ ಸಮ-ಸಾಮಯಿಕ ಬಹು ಭಾಷಿಕ ವ್ಯವಸ್ಥೆ/ ತ್ರಿಭಾಷಾ ಸೂತ್ರ ಬದ್ಧತೆಯನ್ನು ದೂರಮಾಡಿಕೊಳ್ಳದೇ ಕನ್ನಡ -ಭಾಷೆಯ ಬಲ ಸಂವರ್ಧನೆಯನ್ನು ಮಾಡಲು ಸಾಧ್ಯವಿದೆ.

ನಾದ ಕೀಲಿಮಣೆ ಕನ್ನಡ -ಭಾಷೆಯನ್ನು ಶಾಲೆ ಹಾಗೂ ಮನೆಗಳಲ್ಲಿ ಗಣಕ ಯಂತ್ರದ ಸಹಾಯದಿಂದ ಕಲಿಸಲು ಹಾಗೂ ಕಲಿಯಲು ಅನುಕೂಲ ಮಾಡಿಕೊಡುವ ಒಂದು ವಿಶೇಷ  ವಿನ್ಯಾಸದ ಕೀಲಿಮಣೆ. ಇದರಲ್ಲಿ ಕೀಲಿಮಣೆಯ ಅಕ್ಷರ ವಿನ್ಯಾಸವನ್ನು ಭಾರತೀಯ ಬ್ರಾಹ್ಮೀ ಭಾಷೆಗಳ ವರ್ಣಮಾಲೆಯ ಸ್ವರೂಪ – ಸ್ವಭಾವ, ಸಂಯೋಜನೆಗಳಿಗೆ ಅನುಸಾರವಾಗಿ ರೂಪಿಸಲಾಗಿದೆ. ಇಲ್ಲಿ  ನಾವು ಪ್ರತಿಪಾದಿಸುತ್ತಿರುವ ಅಂಶ : ಕನ್ನಡದ ಅ-ಆ-ಇ-ಈ ಕಲಿಯಲು – ಕಲಿಸಲು  A-B-C-D ಯ ಊರೆಗೋಲು ಬೇಕಿಲ್ಲ. ಈ ರೀತಿಯಾಗಿ ಕನ್ನಡವನ್ನು ಕನ್ನಡವಾಗಿ ಕಲಿಸಿ ಬೆಳೆಸಲು ಶಾಲಾ ಹಂತಗಳಲ್ಲಿ ಪ್ರಾಥಮಿಕ ದೇಶ -ಭಾಷೆ, ಮಾತೃ ಭಾಷೆ, ಸಂಸ್ಕೃತಿ -ಭಾಷೆಯಾಗಿ ’ಕುರಿತೋದದೆಯುಂ ಪರಿಣತಮತಿಗಳಾಗಿ’  ಕನ್ನಡ ಪಂಪ- ರನ್ನ ಮುದ್ದಣರನ್ನು ಬೆಳಸುವ ಕಾರ್ಯದಲ್ಲಿ ನಾದ ಕೀಲಿಮಣೆ ತನ್ನ ಅಳಿಲು ಸೇವೆಯನ್ನು ಸಲ್ಲಿಸುತ್ತಿದೆ.  ಇದರಿಂದ  ಮುಂದೊಂದು ಕಾಲದಲ್ಲಿ ಕನ್ನಡದಿಂದ ಇಂಗ್ಲೀಷನ್ನು ಬರೆಯಲು ಸಾಧ್ಯವಾದಾಗ , ಹದಿನೆಂಟನೆಯ ಶತಮಾನದಲ್ಲಿ ಮೂಡಿದ  ’ರೋಮನೈಸೇಷನ್’ ವಿಷದ ಅತಿರೇಕ ತಗ್ಗಬಹುದೆಂದು ನಮ್ಮ ವಿಶ್ವಾಸ.

info@ka-naada.com